Chairman's Talk

‘Excellence is the gradual result of always striving to do better. It comes from looking into the smallest detail, and going that extra mile.’

We, at STG Public School, with the blessing of the almighty have a vision of nurturing each individual to be a Global citizen with Humane qualities in thought, word and deed.

Our earnest effort is to provide them knowledge and skills that allows them to realise their dreams and ignite the passion to excel.

The school encourages students from different socio – economic backgrounds with an aim to provide Holistic Education with the best of facilities and opportunities there by empowering them to face the challenges of life yet firmly grounded to the roots where they once embarked on a journey of acquiring knowledge.

ಎಸ್.ಟಿ.ಜಿ ಪಬ್ಲಿಕ್ ಶಾಲೆಯ ಸಂಸ್ಥಾಪಕರಾಗಿ ನಮ್ಮ ತಂದೆ ತಾಯಿಗಳ ಆಶೀರ್ವಾದದೊಂದಿಗೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವ ಸಲುವಾಗಿ ಈ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ . ಇಂದಿನ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಲು ತಮ್ಮ ಸ್ವಂತ ಗ್ರಾಮದಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ನಗರ ಪ್ರದೇಶದಲ್ಲಿ ಮಕ್ಕಳ ಕಲಿಕೆಗೆ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆಯೋ ಅಂತಹ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ಮಕ್ಕಳಿಗೆ ನೀಡಬೇಕೆಂಬ ಮಹದಾಸೆಯಿಂದ ಚಿನಕುರಳಿಯಲ್ಲಿ ಸಿ.ಬಿ.ಎಸ್.ಇ ಪಠ್ಯಕ್ರಮ ಆಧಾರಿತ ವಿನೂತನವಾದ ಎಸ್.ಟಿ.ಜಿ ಪಬ್ಲಿಕ್ ಶಾಲೆಯನ್ನು ಪ್ರಾರಂಭಿಸಿದ್ದೇವೆ. ಮಕ್ಕಳ ಕಲಿಕೆಗೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿರುವುದು ಈ ಶಾಲೆಯ ಒಂದು ವಿಶೇಷ. ಉತ್ತಮ ತರಭೇತಿ ಹೊಂದಿರುವ ಶಿಕ್ಷಕವೃಂದ ಹಾಗೂ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಕಲಿಕೆ, ಉತ್ತಮವಾದ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣ, ಆಂಗ್ಲ ಭಾಷೆಯನ್ನು ಸುಲಭವಾಗಿ ಮಾತನಾಡುವ ಸಲುವಾಗಿ ಆಂಗ್ಲಭಾಷಾ ಪ್ರಯೋಗಾಲಯ, ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಾಲಯಗಳು, ಪ್ರತಿ ತರಗತಿಯಲ್ಲೂ ಸ್ಮಾರ್ಟ್ ಬೋರ್ಡ್ ವ್ಯವಸ್ಥೆ, ಸುಸಜ್ಜಿತವಾದ ಸಾರಿಗೆ ಸೌಲಭ್ಯ, ಸಿಸಿ ಟಿವಿ ಕ್ಯಾಮೆರಾ ಹೀಗೆ ಅನೇಕ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಮಕ್ಕಳು ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ಸಾಂಸ್ಕೃತಿಕ ಮತ್ತು ಆದ್ಯಾತ್ಮಿಕವಾಗಿ ತಮ್ಮ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳಲು ಪಠ್ಯಗಳ ಜೊತೆಗೆ ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಕಲಿಸಲಾಗುತ್ತಿದೆ. ನಮ್ಮ ಮುಖ್ಯ ಉದ್ದೇಶ ಗ್ರಾಮೀಣ ಪ್ರದೇಶದ ಮಕ್ಕಳು ಸಮಾಜದಲ್ಲಿ ಒಂದು ಉನ್ನತವಾದ ಸ್ಥಾನಮಾನ ಪಡೆದು ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಿ ಈ ಸಮಾಜದ ಉತ್ತಮ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಾಗಿದೆ.